“Anchu”-by SL Byrappa

“ಅಂಚು”
“ಅಂಚು” ಓದಿ ಮುಗಿಸಿದೆ, ಅದರ ಬಗೆಗಿನ ಕಿರು ಬರಹ ಬರೆಯ ಬೇಕೆನಿಸಿತು. ಹೆಣ್ಣಿನ ಭಾವತರಂಗಗಳ ತೊಳಲಾಟದ ಅದ್ಭುತ ಚಿತ್ರಣ “ಅಂಚು”- ಭೈರಪ್ಪನವರ ಕಿರೀಟದಲ್ಲೊಂದು ಗರಿ.
ಎಲ್ಲದರಲ್ಲೂ, ಎಲ್ಲರಿಂದಲೂ ಮೋಸಗೊಂಡು ನೋವು, ಸಂಕಟ, ದ್ವೇಷ, ಅಸೂಯೆ, ನಿಸ್ಸಹಾಯಕ  ಭಾವೆಚ್ಚೆಗಳ ನಡುವೆ ಉರಿದು ಬೇಯುವ ಹೆಣ್ಣಿನ ಪಾತ್ರ ಅತ್ಯದ್ಭುತ ಸೃಷ್ಟಿ. ಕತೆಯ ಮಧ್ಯದಲ್ಲಿ ಅಲ್ಲಲ್ಲಿ ಬರುವ ಶೊನ್ಯಭಾವನೆಯ ಆಸರೆಯಲ್ಲಿ ಅವಳು ಮಾಡುವ ಉತ್ಕಟತೆಯ ಸಂಭಾಷಣೆಗಳು ತುಸು ಬೇಸರವೆನಿಸಿದರೂ ನಂತರ ಕುತುಹಲ ಕಾಯ್ದಿರಿಸಿಕೊಂಡು ಸಾಗುವ ಲಹರಿ ಭೈರಪ್ಪನವರ ವಿದ್ವತ್ತಿನ ಕಿರು ಪರಿಚಯ ಮಾಡಿಕೊಡುತ್ತದೆ.
ಅಮೃತಾಳ ಭಾವಪಲ್ಲಟನಗಳಿಗೆ ಅವಳ ಜೀವನದಲ್ಲಿ ಸತತವಾಗಿ ಸೋತು, ಸೋಲುತ್ತಿರುವ ಸಂಕಟ, ಎಷ್ಟು ಹೇಳಿಕೊಂಡರೊ-ತೋಡಿಕೊ೦ಡರೊ ಬತ್ತದ ನೋವು. ತನ್ನನ್ನೇ ತಾನು ನಾಶಮಾಡಿಕೊಳ್ಳುವಷ್ಟು ಕೋಪ, ನಿಸ್ಸಹಾಯಕತೆಗಳೇ ಇ ಕಾದಂಬರಿಯ ಮೂಲ ವಸ್ತು.
ಚಿಕ್ಕಮ್ಮನ ಪಾತ್ರರಚಿಸಿದ ಭೈರಪ್ಪನವರ ಜಾಣ್ಮೆ ಪ್ರಶ೦ಸನೀಯ. ಈ ಪಾತ್ರದ ರೊಪರೇಖೆಗಳನ್ನ ಮನಸ್ಸು-ಭಾವನೆಗಳ ಸ್ತಿಮಿತಗಳಿಲ್ಲದ ಅಮೃತಾಳ ಮೊಲಕ ವಾಚಕರಿಗೆ ಪರಿಚಯ ಮಾಡಿಸಿರುವುದು ಒಂದು ತೆರೆನಾದ ಕುತೂಹಲ ಮುಚ್ಚಿಟ್ಟು ವಾಚಕರ ಕಲ್ಪನೆ, ತುಲನೆಗೆ ಅಡಿಮಾಡಿಕೊಟ್ಟಿರುತ್ತಾರೆ.
ಹೆಣ್ಣಿನಿ೦ದಲೇ ಸೋತ ಹೆಣ್ಣು ತನ್ನನೊ, ತನ್ನನ್ನ ಪ್ರಿತಿಸುವವರನ್ನೂ ನಾಶಪಡಿಸುವ೦ಹ ಅತ್ಯುಗ್ರ ಭಾವನೆಗಳನ್ನೊತ್ತು ವಿನಾಶದ ಅಂಚಿನ ಕಾಡಾ೦ದಕಾರದಲ್ಲಿ ಕಳೆದುಹೋಗಿರುವಾಗ ಅನಿರೀಕ್ಷಿತವಾಗಿ ಮಿನುಗುವ ಸಣ್ಣ ಕಾ೦ತಿಯ ಸನ್ನಿವೇಶ…..ಆಹಾ!!!
ಸೊಮುವಿನ ಪಾತ್ರ ವಾಸ್ತವಕ್ಕೆ ದೊರವಾದರೂ ಸುಂದರ ಕಲ್ಪನೆ.  ಎಂತಹ ಯಾತನೆಯಿಂದಲೂ ಕೊಡ ಸಹನೆ, ನಿಷ್ಕಲ್ಮಶ ಪ್ರೀತಿಯಿಂದ ಗೆಲ್ಲಬಹುದು ಎಂಬ ಅಂಶವನ್ನ ಅಭಿವ್ಯಕ್ತ ಪಡಿಸುತ್ತದೆ.
ಚಲನಚಿತ್ರಕ್ಕೆ ಬೇಕಾದ ಪ್ರೀತಿ,ದ್ವೇಷ, ಅಸೂಯೆ, ಮೊಸ, ಭಾವುಕತೆ, ರೊಮಾಂಚನ, ಕುತೂಹಲ, ಡ್ರಾಮ, ಮೋಹ, ಮತ್ಸರ ಮತ್ತು ಕಾಮ ಎಲ್ಲಾ ಅಂಶಗಳಿದ್ದರೊ ಯಾವ ನಿರ್ದೇಶಕರಿಗೂ ಮನಸ್ಸಾಗದಿರುವುದು ಖೆದ ತರುವಂತ ವಿಷಯ. ಕನ್ನಡ ಚಿತ್ರರಂಗದವರು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.
ಸಹೃದಯ ವಾಚಕರು “ಅಂಚು” ಬಗೆಗಿನ ತಮ್ಮ ಅಭಿಪ್ರಾಯಗಳನ್ನ ಅ೦ಚಿಕೊಳ್ಳಬೇಕಾಗಿ ಬೇಡಿಕೆ.
                                                                                                                                                           -ಶ್ರೀನಿ-
Advertisements

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s