“ಭಯವೋ? ಭಕ್ತಿಯೋ? ನಾ ಕಾಣೆ”

“ಭಯವೋ? ಭಕ್ತಿಯೋ? ನಾ ಕಾಣೆ”

ದೇವರ ಮೇಲಿರುವ ನಂಬಿಕೆಯೇ ಮನುಷ್ಯ ಮಾಡುವ ಪಾಪಗಳಿಗೆ ಕಾರಣವೆಂದು ನನ್ನ ಭಾವನೆ. ಏಕೆಂದರೆ ದೇವರಲ್ಲಿ ಭಕ್ತಿಗಿಂತ ಭಯವೇ ಹೆಚ್ಚು ಮನುಷ್ಯನಿಗೆ, ಅದಕ್ಕೆ ಅವನು ಕಂಡುಕೊಂಡ ಪರ್ಯಾಯ ಮಾರ್ಗವೂ ಒಂದುಂಟು. ಅದೇ ದೇವರಮೆಲಿನ ಭಕ್ತಿಯ ಹೆಸರಿನಲ್ಲಿ ಮನುಷ್ಯ ತೆರೆದಿಟ್ಟ ‘ಕರೆಂಟ್ ಅಕೌಂಟ್’. ಮನುಷ್ಯ ಮಾಡಿದ/ಮಾಡುವ ಪಾಪಗಳಿಗೆ ಅವನು ಮಾಡಿಕೊಂಡಂತ ಒಪ್ಪಂದ. ತಾನು ಮಾಡುವ ಪಾಪಗಳ -ve ಬ್ಯಾಲೆಂಸ್ಅನ್ನು ಇಷ್ಟು ದಿನಗಳ ಒಳಗೆ ಬಂದು ನಿನ್ನ ಸನ್ನಿದಾನದಲ್ಲಿ ಧಾನ, ಧರ್ಮ, ಪೂಜೆ-ಪುರಸ್ಕಾರ, ಹೋಮ-ಹವನ ಇತ್ಯಾದಿಗಳನ್ನ ಹಣ ಕರ್ಚು ಮಾಡಿ ತೀರಿಸುತ್ತೇನೆ ಎಂದು. ನನ್ನ ಅನಿಸಿಕೆಯ ಪ್ರಕಾರ ಮನುಷ್ಯ-ದೇವರ ನಡುವೆ ಇರುವ ಒಪ್ಪಂದ ನಮ್ಮ ಪ್ರಸ್ತುತ ಸಮಾಜದ ಬ್ರಷ್ಟಚಾರದನ್ತೆಯೇ ಇದೆ.

ದೇವರನ್ನು ದೇವಸ್ತಾನದಲ್ಲಿ ಬಿಟ್ಟು ತನ್ನೊಳಗೆ ಮನುಷ್ಯ ಹುಡುಕತೊಡಗಿದರೆ ತಾನು ಮಾಡುವ/ಮಾಡಬಹುದಾದಂತ ಪಾಪಕರ್ಮಗಳ ಲೆಕ್ಕಾಚಾರ ಅವನೇ ಜವಾಬ್ದಾರಿಯಿಂದ ಹಾಕಿಕೊಂಡರೆ ತಾನು ಮಾಡುವ ಪಾಪಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾದಿತು. ತಾನು ಮಾಡಿದ್ದು ತನಗೇ ಹಿಂದಿರುಗತ್ತದೆ “What you sow, so you reap” ಎಂಬ ಸತ್ಯವನ್ನು ಅರಿತುಕೊಂಡರೆ ಸಾಕು ದೇವರು ತನ್ನಲ್ಲಿಯೇ ಕಾಣ ಸಿಗುತ್ತಾನೆ.

ಪ್ರತಿಯೊಬ್ಬ ಮನುಷ್ಯನು ಕರ್ಮಸಿದ್ದಾ೦ತದ ಬಗ್ಗೆ ಒಮ್ಮೆ ಓದಬೇಕು/ಕೇಳಬೇಕು/ತಿಳಿದುಕೊಳ್ಳಬೇಕು. ಇದನ್ನು ಅರಿತ ಮನುಷ್ಯ ಯಾವ ಪಾಪವನ್ನೂ ಮಾಡಲಾರ ಆಗ ಅವನು ಯಾವ ದೇವರಿಗೂ ಹೆದರಬೇಕಾಗಿಲ್ಲ, ಯಾವ ದೇವರ ಹೆಸರಿನಲ್ಲೂ ಕರೆಂಟ್ ಅಕೌಂಟ್ ತೆರೆಯುವ ಅವಶ್ಯಕತೆಯಿಲ್ಲ. ಮನುಷ್ಯ ತನಗೂ ತನ್ನ ಸುತ್ತಲಿನ ಪರಿಸರಕ್ಕೂ ಶಾಂತಿ ನೆಮ್ಮದಿಯನ್ನು ತರುತ್ತಾನೆ.

ಕರ್ಮಸಿದ್ದಾ೦ತ ಮನುಷ್ಯನ ಅಹಂಕಾರವನ್ನು ಕರಗಿಸುತ್ತದೆ,
ದೇವರಲ್ಲಿ ನಿಜವಾದ ಭಕ್ತಿ ಮೂಡಿಸುತ್ತದೆ,
ದೆವರಮೇಲಿನ ಭೀತಿ ಸುಟ್ಟುಹಾಕುತ್ತದೆ,
ದೇವರಿಗೆ ಕರ್ಚು ಮಾಡುವ ಹಣವನ್ನು ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಸದುಪಯೂಗಿಸಿದರೆ ದೇವರಿಗೇ ಅದೇ ಪೂಜೆ ನೈವೆಧ್ಯ ಅವನು ಬಯಸುವುದು ಮನುಷ್ಯನ ನಡುವೆ ಬ್ರಾತೃತ್ವ, ಸಕಲ ಜೀವಿಗಳ ಕರುಣೆ-ಪ್ರೀತಿ,
ದಾನಗಳಲ್ಲಿ ಮಹಾದಾನ ವಿಧ್ಯಾದಾನ,
ಸತ್ತಮೇಲೆ ನಮ್ಮ ದೇಹ ಉಳಿದ ನಮ್ಮ ಸಹೋದರರ ನೆರವಿಗೆ ಬರಲಿ, ಇರುವಾಗ ನಾಲ್ಕು ಜನರಿಗೆ ನಮ್ಮ ಕೈಲಾದ ಸಹಾಯ ಮಾಡೋಣ,
ಇನ್ನೊಬ್ಬರಿಗೆ ಕೇಡು ಬಯಸುವುದು ಬೇಡ,
ನಮ್ಮ ಇಂದಿನ ನಾಳೆಯ ಜೀವನಕ್ಕೆ ಬೇಕಾಗುವಷ್ಟು ದುಡಿಯೊಣ, ತಿನ್ನೋಣ ಅತಿಯಾಸೆ ಬೇಡ ನಮ್ಮ ಒಳಿದ ಸಹೋದರರಿಗೂ ಬಿಡೋಣ, ನಮ್ಮಲ್ಲಿ ಹೆಚ್ಚಿದ್ದರೆ ಹಂಚೋಣ- ಕೊಡುವುದರಲ್ಲಿ ಸುಖವಿದೆ, ದೇವರ ಸಾನಿತ್ಯವಿದೆ, ಭಕ್ತಿಯಿದೆ.

ನಾನು ದೇವರನ್ನು ಅತಿಯಾಗಿ ಪೂಜಿಸುತ್ತಿದ್ದೆ ಸೋಮವಾರ-ಶಿವ,
ಮಂಗಳವಾರ -ಸುಬ್ರಮಣ್ಯ,
ಗುರುವಾರ-ಸಾಯಿಬಾಬ, ರಾಯರು,
ಶುಕ್ರವಾರ-ಚಾಮುಂಡಿ ನಿಮಿಷಾಂಬ,
ಶನಿವಾರ-ಆಂಜನೇಯ, ವೆಂಕಟೇಶ್ವರ, ಶನಿರಾಯ.
ನನ್ನ ಜೀವದಲ್ಲಿ ಅನಿರೀಕ್ಷಿತವಾಗಿ ಒದಗಿಬಂದ ಗಂಡಾಂತರದಿಂದ ನನ್ನ ಭಕ್ತಿಯನ್ನು ಒರೆಹಚ್ಚಿ ನೋಡಿಕೊಳ್ಳುವ ಅವಕಾಶ ಸಿಕ್ಕಿದ್ದು. ದೇವಸ್ತಾನಗಳಿಗೆ ಹೋಗಿ ಸಮಯ ಹಾಳುಮಾಡುವುದನ್ನು ಬಿಟ್ಟು ನನ್ನ ಒಳಗೇ ಅಡಗಿದ್ದ ದೇವರನ್ನು ಹುಡುಕಿಕೊಂಡು ಹೊರಟೆ. ನನ್ನ ಒಳಗೇ ಅಡಗಿದ್ದ ದೇವರು ‘ಈಗ ಬಂದೆಯಾ ಮಗೂ? ಎಷ್ಟು ವರ್ಷ ಕಾಯಿಸಿಬಿಟ್ಟೆ’ ಎಂದಾಗ ಅಷ್ಚರ್ಯವಾಯಿತು. ನನ್ನ ದೇವರು ಹೆದರಿಕೆಯನ್ನು ಬಂಡವಾಳವಾಗಿಟ್ಟುಕೊಂಡವನಲ್ಲ ಬರಿಯ ಭಕ್ತಿಯ, ಪ್ರೀತಿಯ ಭಯಸಿದವನು ಪ್ರತಿಪಾದಿಸಿದವನು. ಅವನು ನನಗೆ ತೊರಿಸಿಕೊಟ್ಟ ನೆಮ್ಮದಿಯ ರಾಜಮಾರ್ಗ ಅದೇ ಪಾಪ-ಪುಣ್ಯಗಳ ಅರಿವು. ಮಾಡುವ ಪಾಪಗಳ ಮೇಲೆ ನನಗೆ ಅರಿವಿದ್ದರೆ ಸಾಕು ಮಾಡುವ ಪಾಪಗಳು ಕಡಿಮೆಯಾಗುತ್ತವೆ. ಮಾಡುವ ಕೆಲಸಗಳಲ್ಲಿನ ತನಗೆ ಹಿತವಾಗಿ ಇತರರಿಗೆ ಕೆಡಕಾಗದಂತೆ ನೋಡಿಕೊಂಡರೆ ಸಾಕು. ಪುಣ್ಯದ ಬಗ್ಗೆ ಯೋಚಿಸಿದರೆ ಅದು ಅಪೇಕ್ಷೆಯಾಗುತ್ತದೆ ದೇವರ ಮನುಷ್ಯನ ಲೇವಾ-ದೇವಿ ಆರಂಬವಾಗುತ್ತದೆ. ಅದನ್ನು ಬಿಟ್ಟು ಮಾನವತವಾದದಿಂದ ಸಕಲ ಜೀವಗಳಲ್ಲಿ ದೇವರನ್ನು ಕಂಡು ಬದುಕಿದರೆ ದೇವರ ಸಾನಿದ್ಯ ಕಂಡಿತಾ.

-ಶ್ರೀನಿ-

Advertisements

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s