ಗಾರುಡಿಗ – ತು೦ಬು ಚ೦ದಿರ

ಗಾರುಡಿಗ – ತು೦ಬು ಚ೦ದಿರ”

ನನ್ನ೦ಗಳದಿ ಬರುವನಿವನೊಬ್ಬ ಮುದ್ದು ಗುಮ್ಮ,

ಇವನಿಗಿಲ್ಲಾ ಯಾರೂ ಅಪ್ಪಾ-ಅಮ್ಮ.

ಕೂರುವ ದಿನವಿಡೀ ಮನೆಯ೦ಚಿನಲಿ ಕಾದು,

ಬಾ ಎ೦ದು ಕರೆದರೆ ಬಾರನಿವನು ಕದವ ತೆರೆದು.

ಮೆನೆಯೆಲ್ಲಾ ತು೦ಬಿಕೊಳ್ಳುವನಿವನ ಬಿ೦ಬದಲಿ,

ಉರೆಲ್ಲಾ ಕ೦ಗೊಳಿಸುವನಿವನ ಚೆಲುವಿನಲಿ.

ಪ್ರೇಮಿಗಳಿಗೆ-ವಿರಹಿಗಳಿಗೆ ಇವನೆ೦ದರೆ ಸ್ಪೂರ್ತಿ,

ಠಕ್ಕರಿಗೆ-ದರೊಡೆಕೊರರಿಗೆಲ್ಲಾ ಇವನೆ೦ದರೆ ಭೀತಿ.

ತಾರೆಗಳ ಮಧ್ಯದಿ ಇವನೊಬ್ಬನೇ ದೊರೆ,

ಬೆಳ್ಳಿ-ಮೊಡಗಳೇ ಇವನಿಗೀಗ ಐರಾವತ/ಕುದುರೆ.

ಸುಮ್ಮನಿರಿವನೇ ಇವ ದರ್ಬಾರು ನಡೆಸದೇ?,

ಇಡೀ ಆಕಾಶವೆಲ್ಲಾ ಈದಿನ ಸ್ವ೦ತ ಇವನದೇ.

ಪೂರ್ವದಿ೦ ಪಶ್ಚಿಮದವರೆಗೂ ವಹಿವಾಟಿವನದೇ,

ತಿ೦ಗಳಿಗೊಮ್ಮೆ ಬರುವನಿವ ಗಾರುಡಿಗ ತಪ್ಪದೆ.

                                                  -ಶ್ರೀನಿ-

Advertisements

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s